ಮಹಿಳೆ ಕಾಣೆ : ಪತ್ತೆ ನೆರವಿಗೆ ಮನವಿ






ಚಿತ್ರದುರ್ಗ (ಕರ್ನಾಟಕ ವಾರ್ತೆ) ನ. 07: ಹೊಳಲ್ಕೆರೆ ತಾಲ್ಲೂಕು ನವೀಲುಕಲ್ಲು ಬೋವಿಹಟ್ಟಿ ಗ್ರಾಮದ ನಿವಾಸಿ ಲಕ್ಷö್ಮಮ್ಮ ಗಂಡ ಹನುಮಂತಪ್ಪ (38) ಕಾಣೆಯಾದ ಕುರಿತು ಅಕ್ಟೋಬರ್ 2 ರಂದು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಕ್ಷö್ಮಮ್ಮ 4.5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ, ತೆಳ್ಳನೆಯ ಮೈಕಟ್ಟನ್ನು ಹೊಂದಿರುತ್ತಾರೆ. ಕುಳ್ಳನೆಯ ಮಹಿಳೆಯಾಗಿದ್ದು, ಹಲ್ಲುಗಳು ಹಿಂದೆ ಹಾಗೂ ಮುಂದೆ ಇರುತ್ತವೆ. ಕಾಣೆಯಾದ ಸಮಯದಲ್ಲಿ ಹಸಿರು ಸೀರೆ ಧರಿಸಿರುತ್ತಾರೆ. ಕನ್ನಡ ಮತ್ತು ತೆಲುಗು ಭಾಷೆಯನ್ನು ಮಾತನಾಡುತ್ತಾರೆ. ಗುರುತು ಪತ್ತೆಯಾದವರು ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08191277277, 9480803165, ಹೊಳಲ್ಕೆರೆ ವೃತ್ತ ನಿರೀಕ್ಷರ ಕಛೇರಿ 08191275376, 9480803135, ಪೊಲೀಸ್ ಉಪಾಧೀಕ್ಷಕರವರ ಕಛೇರಿ ಸಂಖ್ಯೆ 08194-222430, ಜಿಲ್ಲಾ ಕಂಟ್ರೋಲ್ ರೂಂ 08194-222782, 9480803100 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ. (ಫೋಟೋ ಕಳುಹಿಸಲಾಗಿದೆ) ======= ವ್ಯಕ್ತಿ ಕಾಣೆ : ಪತ್ತೆ ನೆರವಿಗೆ ಮನವಿ ******* ಚಿತ್ರದುರ್ಗ (ಕರ್ನಾಟಕ ವಾರ್ತೆ) ನ. 07: ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದ ನಿವಾಸಿ ವಿರೇಶ ತಂದೆ ಮಂಜುನಾಥ (27) ಕಾಣೆಯಾದ ಕುರಿತು ಅಕ್ಟೋಬರ್ 16 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿರೇಶ ಆಟೋ ಚಾಲಕನಾಗಿದ್ದು, ಸುಮಾರು 5 ಅಡಿ ಎತ್ತರ, ದುಂಡುಮುಖ, ಸಾದಾರಣ ಮೈಕಟ್ಟು, ಗೋಧಿ ಮೈಬಣ್ಣವನ್ನು ಹೊಂದಿದ್ದು, ಎಡ ತಲೆಯ ಹಿಂಭಾಗದಲ್ಲಿ ತಗ್ಗು ಬಿದ್ದಿರುತ್ತದೆ. ಮನೆಯಿಂದ ಹೋಗುವಾಗ ಪಿಂಕ್ ಕಲರ್ ಡ್ರೆಸ್ ಧರಿಸಿರುತ್ತಾನೆ, ಕನ್ನಡ ಮತ್ತು ತೆಲಗು ಭಾಷೆಯನ್ನು ಮಾತನಾಡುತ್ತಾನೆ. ಗುರುತು ಪತ್ತೆಯಾದವರು ಚಿಕ್ಕಜಾಜೂರು ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 9480803150, ಪೋಲಿಸ್ ಉಪಾಧೀಕ್ಷಕರ ದೂರಾವಾಣಿ ಸಂಖ್ಯೆ 08194-222430, 9480803120, ಜಿಲ್ಲಾ ಪೋಲಿಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194-222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ. (ಫೋಟೋ ಕಳುಹಿಸಲಾಗಿದೆ) ======= ವ್ಯಕ್ತಿಗಳು ಕಾಣೆ : ಪತ್ತೆ ನೆರವಿಗೆ ಮನವಿ ******** ಚಿತ್ರದುರ್ಗ (ಕರ್ನಾಟಕ ವಾರ್ತೆ) ನ. 05: ಕೋಟೆ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಗಳು ಕಾಣೆಯಾದ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ನಗರದ ಹೊಳಲ್ಕೆರೆ ರಸ್ತೆ ಬರಗೇರಿಬೀದಿ 2ನೇ ಕ್ರಾಸ್‌ನ ನಿವಾಸಿ ಧನಂಜಯ್ ರೆಡ್ಡಿ ತಂದೆ ಬಿ.ಟಿ. ತಂದೆ ತಿಮ್ಮರೆಡ್ಡಿ (75) ಮಾರ್ಚ್ 14 ರಿಂದ ಕಾಣೆಯಾಗಿರುತ್ತಾರೆ. ಧನಂಜಯ್ ರೆಡ್ಡಿ 5.5 ಅಡಿ ಎತ್ತರವಿದ್ದು, ಸಾಧರಣ ಮೈಕಟ್ಟು, ಗೋಧಿ ಮೈಬಣ್ಣವನ್ನು ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ನೇರಳೆ ಬಣ್ಣದ ತುಂಬು ತೋಳಿನ ಅಂಗಿ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಚಿತ್ರದುರ್ಗ ನಗರದ ಎಂ.P.ೆ ಪ್ಯಾಲೇಸ್ ಹಿಂಭಾಗ, ಗೀರಿಪ್ರಕಾಶ್ ಲೇಔಟ್‌ನ , ಆಂಜನೇಯ ದೇವಸ್ಥಾನ ಹತ್ತಿರದ ನಿವಾಸಿ ಹಸನ್ ಅಲಿ ಸಿ.ಎನ್. ತಂದೆ ಜಬೀವುಲ್ಲಾ (31) ಸೆಪ್ಟೆಂಬರ್ 18 ರಂದಿ ಕಾಣೆಯಾಗಿರುತ್ತಾರೆ. ಹಸನ್ ಅಲಿ ಸಿ.ಎನ್. ಸಾಫ್ಟ್ವೇರ್ ಇಂಜಿನಿಯರ್ ವೃತ್ತಿ ಮಾಡುತ್ತಿದ್ದು, 5 ಅಡಿ ಎತ್ತರ, ದುಂಡುಮುಖ, ದೃಡಕಾಯ ಶರೀರ, ಗೋಧಿ ಮೈಬಣ್ಣವನ್ನು ಹೊಂದಿದ್ದು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಮತ್ತು ಬಿಳಿ ಶರ್ಟ್ ಧರಿಸಿರುತ್ತಾನೆ. ಉರ್ದು, ಹಿಂದಿ, ಕನ್ನಡ, ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾನೆ. ಕಾಣೆಯಾದವರ ಗುರುತು ಪತ್ತೆಯಾದವರು ಕೋಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08194-222933, 9480803145. ಪೋಲಿಸ್ ಉಪಾಧೀಕ್ಷಕರ ದೂರವಾಣಿ ಸಂಖ್ಯೆ 08194-222430, 9480803120, ಜಿಲ್ಲಾ ಪೋಲಿಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194222782 ಗೆ ಕರೆ ಮಾಡುವಂತೆ ಪ್ರಕಟಣೆ ಕೋರಿದೆ. (ಫೋಟೋ ಕಳುಹಿಸಲಾಗಿದೆ) ======== ಯುವತಿ ಕಾಣೆ : ಪತ್ತೆ ನೆರವಿಗೆ ಮನವಿ ******** ಚಿತ್ರದುರ್ಗ (ಕರ್ನಾಟಕ ವಾರ್ತೆ) ನ. 07: ಹೊಳಲ್ಕೆರೆ ತಾಲ್ಲೂಕು ಮಾರುತಿನಗರ ಚಿಕ್ಕಜಾಜೂರು ಗ್ರಾಮದ ನಿವಾಸಿ ಸಾದೀಕ್ ಬಾನು ತಂದೆ ಲೇಟ್ ಮಕ್ಬೂಲ್ ಸಾಬ್ (18) ಕಾಣೆಯಾದ ಕುರಿತು ಅಕ್ಟೋಬರ್ 16 ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾದೀಕ್ ಬಾನು ಬಟ್ಟೆ ಅಂಗಡಿ ಕೆಲಸ ಮಾಡುತ್ತಿದ್ದು, ಸುಮಾರು 4.5 ಅಡಿ ಎತ್ತರ, ಕೋಲುಮುಖ, ಸಾದಾರಣ ಮೈಕಟ್ಟು, ಗೋಧಿ ಮೈಬಣ್ಣವನ್ನು ಹೊಂದಿದ್ದು, ಎಡ ಮತ್ತು ಬಲ ಕೆನ್ನೆಯ ಮೇಲೆ ಕಪ್ಪು ಮಚ್ಚೆ ಇರುತ್ತದೆ. ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ, ಕನ್ನಡ, ಹಿಂದಿ ಮತ್ತು ಉರ್ದು ಭಾಷೆಯನ್ನು ಮಾತನಾಡುತ್ತಾಳೆ. ಕಾಣೆಯಾದವರ ಗುರುತು ಪತ್ತೆಯಾದವರು ಚಿಕ್ಕಜಾಜೂರು ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ 9480803150, ಪೋಲಿಸ್ ಉಪಾಧೀಕ್ಷಕರ ದೂರಾವಾಣಿ ಸಂಖ್ಯೆ 08194-222430, 9480803120, ಜಿಲ್ಲಾ ಪೋಲಿಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08194222782 ಗೆ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ. (ಫೋಟೋ ಕಳುಹಿಸಲಾಗಿದೆ)